ಫೈಲೋ, ಜೂಡೀಅಸ್ - 
	ಕ್ರಿ. ಪೂ. ಸು. 20ರಿಂದ ಕ್ರಿ. ಶ. ಸು. 50. ಅಲೆಗ್ಸಾಂಡ್ರಿಯನ್ ಶಾಖೆಯ ಯಹೂದಿ ದಾರ್ಶನಿಕರಲೊಬ್ಬ. ಹೆಲನಿಸ್ಟಿಕ್ ಜೂಡಾಯಿಸಮ್ಮಿನ ಪ್ರಮುಖ ಪ್ರತಿನಿಧಿ ಹಾಗೂ ಅದೇ ಪಂಥದ ಪ್ರಥಮ ದೇ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ವತಾಶಾಸ್ತ್ರಜ್ಞ. ಅಲೆಗ್ಸಾಂಡ್ರಿಯದ ನಿವಾಸಿಯಾಗಿದ್ದಿರಬಹುದು. ಈತನ ಬದುಕಿನ ಬಗ್ಗೆ ದೊರೆಯುವ ಒಂದೇ ಒಂದು ಘಟನೆಯೆಂದರೆ ರೋಮ್ ನಗರಕ್ಕೆ ತೆರಳಿ ಅಲ್ಲಿನ ಚಕ್ರವರ್ತಿಯಾಗಿದ್ದ ಕ್ಯಾಲಿಗುಲನನ್ನು ಯಹೂದ್ಯಜನಾಂಗದಿಂದ ದೈವಿಕಮರ್ಯಾದೆಗಳನ್ನು ಅಪೇಕ್ಷೆ ಮಾಡಕೂಡದೆಂದು ಒತ್ತಾಯಿಸಿದ್ದು. ಹುಟ್ಟಿನಿಂದ ಯಹೂದ್ಯ ಆಗಿದ್ದರೂ ಅಧ್ಯಯನದಲ್ಲಿ ಆಸಕ್ತಿ ಹರಿದದ್ದು ಗ್ರೀಕ್ ತತ್ತ್ವಶಾಸ್ತ್ರದೆಡೆಗೆ. ಪ್ರಾಚೀನ ಪ್ರೌಢ ಗ್ರಂಥಗಳ ಮಾದರಿಯಲ್ಲಿಯೇ ಪ್ರಮುಖವಾಗಿ ಪ್ಲೇಟೋ ಬರವಣಿಗೆಯ ಮಾದರಿಯಲ್ಲಿ ಈತ ಗ್ರಂಥಗಳನ್ನು ರಚಿಸಿದ್ದಾನೆ. ಪ್ರಮುಖ ಗ್ರೀಕ್ ದಾರ್ಶನಿಕರ ಅಭಿಪ್ರಾಯಗಳಿಂದ ಪ್ರಭಾವಿತನಾಗಿದ್ದರೂ ಅವನ್ನು ಕರಗತ ಮಾಡಿಕೊಂಡು ತನ್ನದೇ ಆದ ಹೊಸಬಗೆಯ ತತ್ತ್ವವೊಂದನ್ನು ಯಶಸ್ವಿಯಾಗಿ ನಿರೂಪಿಸಿದ್ದಾನೆ. ಈತನ ತತ್ತ್ವಗಳ ವೈಶಿಷ್ಟ್ಯ ಧಾರ್ಮಿಕ, ವಿಷಯಗಳಿಗೆ ಹೆಚ್ಚು ಪ್ರಾಧಾನ್ಯ ಇರುವುದು. ಪೆಂಟಾಟಿಕ್‍ನಲ್ಲಿನ ಶಬಲಖಚಿತ ಚಿತ್ರಕಲೆಯಲ್ಲಿಯ ಬರೆವಣಿಗೆ ಸಂಪೂರ್ಣವಾಗಿ ದೈವನಿಯೋಜಿತವಾದುದೆಂದೂ ಅದು ಎಲ್ಲ ಸತ್ಯಗಳನ್ನು ಒಳಗೊಂಡಿರುವುದೆಂದೂ ದೃಢ ನಂಬಿಕೆ.

	ದೇವರನ್ನು ಕುರಿತ ಈತನ ನಿಲವು ಒಂದು ರೀತಿಯಲ್ಲಿ ಶಂಕರನ ನಿರ್ಗುಣ ಬ್ರಹ್ಮದ ಕಲ್ಪನೆಯನ್ನೇ ಹೋಲುತ್ತದೆ. ದೇವರು ಗುಣಾತೀತನೂ ಆತ್ಮದೇಹಗಳ ಸಂಯೋಜನಾರಹಿತನೂ ಆಗಿದ್ದು ಭೌತ ವಸ್ತುಗಳಿಂದಾಗಲೀ ಇನ್ನಾವುದೇ ಆಕಸ್ಮಿಕ ಗುಣಗಳಿಂದಾಗಲೀ ನಿರ್ಮಾಣವಾಗದೆ ಅನಂತನೂ ಬದಲಾವಣೆ ಇಲ್ಲದವನೂ ಸ್ವತಂತ್ರನೂ ಪರಿಪೂರ್ಣನೂ ಸೌಂದರ್ಯ ಹಾಗೂ ಉತ್ಕøಷ್ಟತೆಗಿಂತ ಮಿಗಿಲಾಗಿರುವವನೂ ಆಗಿದ್ದಾನೆ. ಯಾವುದೇ ರೀತಿಯ ಗುಣಾರೋಪ ಬಂದಲ್ಲಿ ದೇವರನ್ನು ಒಂದು ರೀತಿ ಲೌಕಿಕ ಮಟ್ಟಕ್ಕೆ ಇಳಿಸಿದಂತಾಗುತ್ತದೆ ಎಂಬುದು ಈತನ ವಾದ.
	ವಿಶ್ವ ಕೇವಲ ರೂಪಿಸಿದ್ದೇ ಹೊರತು ಸೃಷ್ಟಿಸಿದ್ದಲ್ಲ, ಏಕೆಂದರೆ ದೇವರ ಜೊತೆಯಲ್ಲಿ ವಸ್ತು ಉದಯಿಸಲು ಸಾಧ್ಯವಿಲ್ಲ. ವಸ್ತು ಅಜೀವವಾಗಿದ್ದು, ಆಕಾರ ರಹಿತವೂ ಚಲನೆಯಿಲ್ಲದ್ದೂ ಆಗಿದೆ. ದೇವರು ವಾಸ್ತವ ಪ್ರಪಂಚವನ್ನು ಕೇವಲ ರೂಪಿಸಿರುವನಲ್ಲದೆ ಅದನ್ನು ಅವನು ಎಂದೂ ಸೃಷ್ಟಿಸಿಲ್ಲ ಎಂಬುದು ಜಗತ್ತು ಮತ್ತು ಸೃಷ್ಟಿಕ್ರಿಯೆಗೆ ಸಂಬಂಧಿಸಿದ ಈತನ ವಾದ.
	ಮಾನವನನ್ನು ಕುರಿತ ಈತನ ಸಿದ್ಧಾಂತ ಬಹುಮಟ್ಟಿಗೆ ಪ್ಲೇಟೋನಿಂದ ಪ್ರಭಾವಿತವಾಗಿದೆ. ಮನುಷ್ಯ ಉಚ್ಚ ಹಾಗೂ ಕೆಳಮಟ್ಟದ ಹುಟ್ಟುಗಳನ್ನು ಹೊಂದಿದ್ದು, ಉತ್ತಮ ಆತ್ಮಗಳು ಸದಾ ಗಗನವಾಸಿಗಳಾಗಿರುತ್ತವೆ. ಭೂಮಿಗೆ ಹತ್ತಿರವಿರುವ ಆತ್ಮಗಳು ಇಂದ್ರಿಯಯುಕ್ತ ದೇಹಗಳಿಗೆ ನುಗ್ಗುತ್ತವೆ. ಮನುಷ್ಯ ಇಂದ್ರಿಯಗಳ ಪ್ರಭಾವದಿಂದಾಗಿ ಪಾಪ ಹಾಗೂ ಎಲ್ಲ ಅವಗುಣಗಳ ಚಿಲುಮೆಯಾಗಿ ಪರಿಣಮಿಸುತ್ತಾನೆ. ಇದರಿಂದಾಗಿ ದೇಹ ಒಂದು ರೀತಿಯ ಸೆರೆಮನೆಯಾಗಿ ಪರಿಣಮಿಸುವುದರಿಂದ ಅದರಲ್ಲಿನ ಆತ್ಮ ಬಿಡುಗಡೆ ಹೊಂದಿ ದೈವವನ್ನು ಸೇರಲು ಯತ್ನಿಸುತ್ತದೆ. ಒಟ್ಟಾರೆ ಈತನ ಪ್ರಮುಖ ನೀತಿತತ್ತ್ವವೆಂದರೆ ಪ್ರಪಂಚದ ಇಂದ್ರಿಯಗಳಿಂದ ಮುಕ್ತಿ ಪಡೆಯುವುದು ಹಾಗೂ ಅವು ಉಂಟುಮಾಡಬಹುದಾದ ಪ್ರಚೋದನೆಗಳನ್ನು ನಿಗ್ರಹಿಸುವುದು.
	ಈತನ ಪ್ರಮುಖ ಬರೆವಣಿಗೆಗಳೆಂದರೆ: ಜೆóಟೆಮಾಟ ಕೈ ಲೈಸೆಯಿಸ್ (ಪ್ರಶ್ನೆಗಳು ಮತ್ತು ಪರಿಹಾರಗಳು), ನೊಮೊನ್ ಹೈರೊನ್ ಅಲೆಗೊರಿಯೈ (ಧಾರ್ಮಿಕ ನಿಯಮಗಳಲ್ಲಿನ ರೂಪಕ ಕಥೆಗಳು) ಮತ್ತು ಮೊಸಾಯಿಕ್ ಲಾ ಫಾರ್ ಜೆಂಟಿಲೆಸ್, ಇವಲ್ಲದೆ ಇನ್ನೂ ಅನೇಕ ಬಿಡಿಬರಹಗಳನ್ನು ಇವನಿಗೆ ಆರೋಪಿಸಲಾಗಿದೆ.
(ಎಸ್.ಎನ್.ಜಿ.)